ಮಳೆಯ ನಡುವೆಯೂ ಭಾರತ ಕ್ರಿಕೆಟ್ ತಂಡ ಸೆಮಿಫೈನಲ್‌ಗೆ
ಪುರುಷರ ಕ್ರಿಕೆಟ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಿದ್ದವು. ಆದರೆ ಮಳೆರಾಯನ ಆಗಮನದಿಂದ ಪಂದ್ಯ ರದ್ದಾಯಿತು. ಆದರೂ, ಶ್ರೇಯಾಂಕ ಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದ ಕಾರಣ ಭಾರತ ತಂಡ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಶೂಟಿಂಗ್, ಜೂಡೋ, ಅಥ್ಲೆಟಿಕ್ಸ್‌ನಲ್ಲಿ ಮೆರೆದ ಭಾರತೀಯರು
ಇಶಾ ಸಿಂಗ್ ಮಿಂಚು: ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಸತತ 5 'ಶೂಟ್-ಆಫ್' ಸುತ್ತುಗಳ ರೋಚಕ ಹೋರಾಟ ನಡೆಸಿ ಭಾರತದ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಪಿಂಕಿ ಬಲ್ಹಾರ ಕಂಚು: ಜೂಡೋ ಕ್ರೀಡೆಯ ಮಹಿಳೆಯರ -78 ಕೆಜಿ ವಿಭಾಗದಲ್ಲಿ ಪಿಂಕಿ ಬಲ್ಹಾರ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕ ತಂದಿದ್ದಾರೆ.

ವಿಥ್ಯಾ ರಾಮರಾಜ್ ನ್ಯಾಷನಲ್ ರೆಕಾರ್ಡ್: 400 ಮೀಟರ್ ಹರ್ಡಲ್ಸ್ ರೇಸ್‌ನಲ್ಲಿ ವಿಥ್ಯಾ ರಾಮರಾಜ್ ಅವರು ಹೊಸ ರಾಷ್ಟ್ರೀಯ ದಾಖಲೆ ಬರೆದು ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಅಥ್ಲೆಟಿಕ್ಸ್‌ನ ಜಾವೆಲಿನ್ ಥ್ರೋನಲ್ಲಿ ರೋಹಿತ್ ಯಾದವ್, ಡಿಸ್ಕಸ್ ಥ್ರೋನಲ್ಲಿ ಸೀಮಾ ಪುನಿಯಾ ಹಾಗೂ ಸಾನ್ಯಾ ಯಾದವ್ ಮತ್ತು ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸಾಬ್ಲೆ ಕಣಕ್ಕಿಳಿಯಲಿದ್ದು, ಭಾರತಕ್ಕೆ ಇವತ್ತು ಮತ್ತಷ್ಟು ಪದಕಗಳು ಸಿಗುವ ಭರವಸೆಯಿದೆ.




