ದೇಶದ ಮತದಾರರ ಪಟ್ಟಿಯಿಂದ 13 ಕೋಟಿ ಜನರ ಹೆಸರುಗಳನ್ನು ಕೈಬಿಡಲಾಗಿರುವ ಆರೋಪಕ್ಕೆ ಗುರಿಯಾಗಿರುವ ಮಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಒತ್ತಡ ಹೆಚ್ಚಾಗುತ್ತಿದೆ. ಒಂದು ಕಡೆ ಈ ವಿಷಯವಾಗಿ ಪ್ರತಿಪಕ್ಷಗಳು ಮುಗಿ ಬಿದ್ದಿವೆ. ಮತ್ತೊಂದು ಕಡೆ ಸಿಜೆಪಿ ರಾಜೀನಾಮೆ ಪಡೆಯುವ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದೆ. ಇದರ ಜೊತೆಗೆ ತಮ್ಮ ಮೇಲಿರುವ ಎಲ್ಲಾ ಆರೋಪಗಳಿಗೂ ಮಾಧ್ಯಮಗಳು ಹಾಗೂ ಸಾರ್ವಜನಿಕರ ಮುಂದೆ ಸ್ಪಷ್ಟನೆ ನೀಡುವಂತೆ ಸಿಜೆಪಿ ವಕ್ತಾರ ಅಶುತೋಷ್ ರಂಕಾ ಜ್ಞಾನೇಶ್ ಕುಮಾರ್ ರನ್ನು ಒತ್ತಾಯಿಸಿದ್ದಾರೆ.
.
ನಾವು ಜ್ಞಾನೇಶ್ ಕುಮಾರ್ ರಾಜೀನಾಮೆಗೆ 48ಗಂಟೆಗಳ ಗಡುವು ನೀಡಿದ್ದೆವು. ಆಗ ನಿರ್ಧಾರ ಕೈಗೊಳ್ಳುವ ಹೊಣೆ ಅವರ ಬಳಿ ಇತ್ತು. ಆದರೆ ಅವರು ನಿರ್ಧಾರಲ ಕೈಗೊಂಡಿಲ್ಲ ಇದೀಗ ಅದು ನಮ್ಮ ಕೈಯಲ್ಲಿದೆ. ಹೀಗಾಗಿ ಅಕ್ಟೋಬರ್ 2 ರಿಂದ ದೇಶಾದ್ಯಂತ ಪ್ರತಿಭಟನೆ ಮಾಡಲಿದ್ದೇವೆ..ಅದು ಎಲ್ಲಿವರೆಗೆ ಎಂದರೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಮುಂದುವರೆಯಲಿದೆ ಎಂದಿದ್ದಾರೆ. ಚುನಾವಣಾ ಆಯೋಗವನ್ನು ಸರಿಪಡಿಸಿ ಎಂಬ ಅಭಿಯಾನವನ್ನು ಪ್ರಾರಂಭಿಸಿದ ಯುವಕರ ನೇತೃತ್ವದ ಸಂಘಟನೆಯು, ವಿಶೇಷ ತೀವ್ರ ಪರಿಷ್ಕರಣೆಪ್ರಕ್ರಿಯೆಯ ಸಂದರ್ಭದಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪದ ಮೇಲೆ ಈ ಅಭಿಯಾನವು ಗಮನಹರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬೈನಲ್ಲಿ ಅಕ್ಟೋಬರ್ 2ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಕಾಕ್ರೋಚ್ ಜನತಾ ಪಾರ್ಟಿ'ಗೆ ಅನುಮತಿ ನಿರಾಕರಿಸಲಾಗಿದೆ ಎಂಬ ವರದಿಗಳು ಕೇಳಿ ಬರುತ್ತಿವೆ ಈ ಬಗ್ಗೆ ಕುರಿತು ಪ್ರತಿಕ್ರಿಯಿಸಿದ ರಂಕಾ ಅಸ್ಸಾಂನಲ್ಲಿ ಹೆಸರುಗಳನ್ನು ತೆಗೆದುಹಾಕಲು ಮತ್ತು ಕ್ಷೇತ್ರಗಳನ್ನು ಮರುರೂಪಿಸಲು ಜ್ಞಾನೇಶ್ ಕುಮಾರ್ಗೆ ಅನುಮತಿ ನೀಡಿದವರು ಯಾರು? ನಾಯಕರು ಮತ್ತು ಜ್ಞಾನೇಶ್ ಕುಮಾರ್ನಂತಹ ವ್ಯಕ್ತಿಗಳು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಕೆಲ ಮತಕ್ಷೇತ್ರಗಳಲ್ಲಿ ಚೋರಿ ಹೇಗೆ ನಡೆದಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅಸ್ಸಾಂನಲ್ಲಿನ ಮತಕ್ಷೇತ್ರಗಳ ಮರುವಿಂಗಡಣೆಯನ್ನು ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ನಡೆಸಲಾಗಿದೆ ಎಂದು ರಂಕಾ ಅಪಾದಿಸಿದರು. ಇಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗೆಲುವಿಗೆ ಸಹಾಯವಾಗುವಂತೆ ಒಂದೇ ಗ್ರಾಮದ ಜನರು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸಲು ಸಾಧ್ಯವಾಯಿತು ಎಂದು ಪ್ರತಿಪಾದಿಸಿದರು.

ಮತ ಕಳ್ಳತನದ ಆರೋಪಗಳನ್ನು ಬಿಜೆಪಿ ಹಾಗೂ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯೋಗವನ್ನು ಸಮರ್ಥಿಸಿಕೊಳ್ಳುತ್ತಿದೆ ಇದಕ್ಕೆ ಕಾರಣ ಏನು ಎಂಬುದು ಗೊತ್ತಾಗಬೇಕು ನಮಗೆ ನೆನಪಿರುವಂತೆ, ಚುನಾವಣಾ ಆಯೋಗವು ಒಂದು ಸ್ವತಂತ್ರ ಪ್ರಜಾಸತ್ತಾತ್ಮಕ ಸಂಸ್ಥೆಯೇ ಹೊರತು ಬಿಜೆಪಿಯ ಅಂಗಸಂಸ್ಥೆಯಲ್ಲ ಎಂದು ರಂಕಾ ಕಟುವಾಗಿ ಟೀಕಿಸಿದರು. ಬಿಜೆಪಿ ಜ್ಞಾನೇಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ ಹಾಗಿದ್ದರೆ ಅವರು ಬಿಜೆಪಿಯಿಂದಲೇ ರಾಜ್ಯಸಭಾ ಸದಸ್ಯತ್ವವನ್ನು ಪಡೆಯಲಿ ಎಂದು ಕುಟುಕಿದರು. ಇನ್ನು ಜ್ಞಾನೇಶ್ ಕುಮಾರ್ ಗೆ ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ, ಪತ್ರಿಕಾಗೋಷ್ಠಿ ನಡೆಸಲಿ ಅದರಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಅಂಶಗಳಲ್ಲಿ ತಪ್ಪಿವಿಯಾ..? ಸರಿ ಇವೆಯಾ ಅದನ್ನಾದ್ರೂ ಸ್ಪಷ್ಟ ಪಡಿಸಲಿ ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಆಡಳಿತಾರೂಢ ಸರ್ಕಾರ ಅಹಂಕಾರಿ ಮನಸ್ಥಿತಿಯನ್ನು ತಳೆದೆದಿ. ಯುವಜನರನ್ನು ಕೀಟಗಳು ಮತ್ತು ಜಿರಲೆಗಳಂತೆ ನಡೆಸಿಕೊಳ್ಳುತ್ತಿದೆ. ಆದರೆ ಜೆನ್ ಝಡ್ಪೀ ಪೀಳಿಗೆ ತನ್ನದೇ ಆದ ಭಾಷೆಯಲ್ಲಿ ಉತ್ತರಿಸಲಿದೆ ಎಂದು ರಂಕಾ ಎಚ್ಚರಿಸಿದರು